
ಇವತ್ತಿನ ದಿನದಲ್ಲಿ 100 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಕೂಡ ಸಿಗುವುದಿಲ್ಲ,ಪೆಟ್ರೋಲ್ ಏರಿಕೆಯಿಂದ ಜನರು ಎಲೆಕ್ಟ್ರಿಕ್ ಸ್ಕೂಟರ್ ಕಡೆಗೆ ಮುಖಮಾಡಿದರೆ. ಆದರೆ ಲಕ್ಷ ಲಕ್ಷ ಕೊಟ್ಟು ಒಂದು ಎಲೆಕ್ಟ್ರಿಕ್ ಸ್ಕೂಟರ್ ತೆಗೆದುಕೊಳ್ಳುವುದು ಕಷ್ಟಕರವಾಗಿದೆ.
ಖ್ಯಾತ ಟೂ -ವೀಲರ್ ಕಂಪನಿ TVS MOTORS ಈಗ ಮಧ್ಯಮ ವರ್ಗದ ಜನರಿಗೆ ಅವರ ಬಜೆಟ್ ಗೆ ಹೊಂದುವಂತ ಕೇವಲ 50,000 ರೂಪಾಯಿಗಳಿಗೆ ಟೂ -ವೀಲರ್ ಸ್ಕೂಟರ್ ಬಿಡುಗಡೆಗೊಳಿಸಿದ್ದಾರೆ ಅದುವೇ TVS Orbiter V1.
ಸಾಮಾನ್ಯವಾಗಿ ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹೆಚ್ಚಲು ಅದರ ಬ್ಯಾಟರಿ ಪ್ರಮುಖವಾಗಿರುತ್ತದೆ.ಆದರೆ TVS ನವರು ಮಧ್ಯಮ ವರ್ಗದ ಜನರಿಗೆ ಒಂದು ಒಳ್ಳೆಯ ಎಲೆಕ್ಟ್ರಿಕ್ ಸ್ಕೂಟರ್ ತೆಗೆದುಕೊಳ್ಳಲ್ಲು ಹೊಸ ಐಡಿಯಾ ಮಾಡಿದ್ದಾರೆ.ನೀವು ಸ್ಕೂಟರ್ ಅನ್ನು ಕಡಿಮೆ ಬೆಲೆಗೆ ಖರೀದಿಸಿ,ಬ್ಯಾಟರಿ ಗೆ ಮಾತ್ರ ತಿಂಗಳ ಬಾಡಿಗೆ ಪಾವತಿಸಬಹುವುದು.ಇದನ್ನು BAAS ಎಂದು ಕರೆಯಲಾಗುತ್ತದೆ. ಇದರಿಂದಾಗಿ ಈ ಸ್ಕೂಟರ್ ನ ಬೆಲೆ ಲಕ್ಷ ಲಕ್ಷ ದ ಬದಲಾಗಿ ಕೇವಲ 49,999 ಮಾತ್ರ.
TVS Orbiter V1 ವಿಶೇಷತೆಗಳು:
-
- ಒಂದು ಬಾರಿ ಚಾರ್ಜ್ ಮಾಡಿದರೆ 86ಕಿಲೋಮೀಟರ್ ಚಲಿಸುತ್ತದೆ.
-
- ಕೇವಲ 2 ಗಂಟೆ 20 ನಿಮಿಷದಲ್ಲಿ ಶೇ 80 ರಷ್ಟು ಚಾರ್ಜ್ ಆಗುತ್ತದೆ.
-
- ಸೀಟ್ ಅಡಿಯಲ್ಲಿ 34 ಲೀಟರ್ ಜಾಗವಿದ್ದು, ಹೆಲ್ಮೆಟ್ ಮತ್ತು ದಿನಸಿ ವಸ್ತುಗಳನ್ನು ಸುಲಭವಾಗಿ ಇಡಬಹುವುದು.
-
- ತಿಂಗಳಿಗೆ ರೂಪಾಯಿ 862 ಪಾವತಿಸುವ ಮುಖಾಂತರ ನೀವು ಬ್ಯಾಟರಿ ಬಾಡಿಗೆ (BAAS) ಪಡೆಯಬಹುವುದು.
BAAS ನ ಪ್ರಯೋಜನ :
ಇದು ಒಂದು ರಿಚಾರ್ಜ್ ತರ, ನೀವು ಮೊಬೈಲ್ನ ಸಿಮ್ ಕಾರ್ಡ್ ರಿಚಾರ್ಜ್ ಮಾಡಿದ ರೀತಿ, ಸ್ಕೂಟರ್ ಅನ್ನು ಕಡಿಮೆ ಬೆಲೆಗೆ ಕೊಂಡು,ಬ್ಯಾಟರಿ ಬಳಕೆಗೆ ಕಂಪನಿ ನಿಗದಿಪಡಿಸಿದ ಹಣವನ್ನು ನೀಡುವುದು.ಇದರಿಂದ ಬ್ಯಾಟರಿ ಹಾಳಾದರೆ ಕಂಪನಿ ಜವಾಬ್ದಾರಿಯಾಗಿರುತ್ತದೆ.

TVS Orbiter V1ಟೆಕ್ನಾಲಜಿ :
ಮೊಬೈಲ್ ಕನೆಕ್ಟಿವಿಟಿ,ಪ್ರಮುಖವಾಗಿ ಕಳ್ಳತನ ತಡೆಯುವ ಆಂಟಿ – ಥೆಫ್ಟ್ ಅಲರ್ಟ್ ಮತ್ತು ಗೂಗಲ್ ಮ್ಯಾಪ್ ತರಹದ ನ್ಯಾವಿಗೇಷನ್ ಸೌಲಭ್ಯ ಹೊಂದಿದೆ.


| ವಿವರ | ಮಾಹಿತಿ |
|---|---|
| ಚಾರ್ಜಿಂಗ್ ಸಮಯ (0–80%) | 2 ಗಂಟೆ 20 ನಿಮಿಷ |
| ರೇಂಜ್ | ಒಂದು ಚಾರ್ಜ್‌ಗೆ 86 ಕಿಮೀ |
| ಬ್ಯಾಟರಿ ಸಾಮರ್ಥ್ಯ | 1.8 ಕಿಲೋವಾಟ್ ಗಂಟೆ (kWh) |
| ಕರ್ಬ್ ತೂಕ | 101 ಕೆಜಿ |
| ಗರಿಷ್ಠ ವೇಗ | 68 ಕಿಮೀ/ಗಂ |
| ಬ್ಯಾಟರಿ ವಾರಂಟಿ | 5 ವರ್ಷಗಳು ಅಥವಾ 70,000 ಕಿಮೀ (ಯಾವುದು ಮೊದಲು ಬಂದರೂ) |