ನೀವು ಬುಕ್ ಮಾಡಿದ ಗ್ಯಾಸ್ ಎಲ್ಲಿದೆ ಎಂದು ತಿಳಿಯಲು ಏಜೆನ್ಸಿಗೆ ಪದೇ ಪದೇ ಫೋನ್ ಮಾಡುತಿದ್ದೀರಾ?
ಇನ್ನು ಮುಂದೆ ಕೇವಲ ನಿಮ್ಮ ಮೊಬೈಲ್ನ ಮೂಲಕ ನಿಮ್ಮ ಮನೆಯಲ್ಲಿಯೇ ಕೂತು ಟ್ರ್ಯಾಕ್ ಮಾಡಿ.
ನಮ್ಮ ರಾಜ್ಯದಲ್ಲಿ ಪ್ರಮುಖವಾಗಿ ಮೂರು ಗ್ಯಾಸ್ ಕಂಪನಿಗಳ ಟ್ರಾಕಿಂಗ್ ವಿಧಾನ ಇಲ್ಲಿದೆ ನೋಡಿ.
1.ಹೆ ಚ್ಪಿ ಗ್ಯಾಸ್ (HP GAS)
ನೀವು HP ಗ್ಯಾಸ್ ಬಳಸುತಿದ್ದರೆ ‘HP PAY‘ app ಬಳಸುವ ಮೂಲಕ ತಮ್ಮ ಸಿಲಿಂಡರ್ ವಿತರಣೆಯ ಹಂತವನ್ನು ತಿಳಿದುಕೊಳ್ಳಬಹುವುದು,ಅದರ ಜೊತೆಗೆ HP ಗ್ಯಾಸ್ ನವರ ಅಫೀಷಿಯಲ್ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಗ್ರಾಹಕ ಸಂಖ್ಯೆ ನೀಡಿ ಸ್ಟೇಟಸ್ ಚೆಕ್ ಮಾಡಬಹುವುದು.
2.ಭಾರತ್ ಗ್ಯಾಸ್ (BHARATH GAS)

ಭಾರತ್ ಗ್ಯಾಸ್ ಬಳಕೆದಾರರು ಮೊಬೈಲ್ ನ ಮೂಲಕ ಸುಲಭವಾಗಿ ಮಾಹಿತಿ ಪಡೆಯಬಹುವುದು.
Bharath Gas app ಇನ್ಸ್ಟಾಲ್ ಮಾಡಿ, ನಿಮ್ಮ ಲಾಗಿನ್ ವಿವರ ನೀಡಿ,’Booking History‘ ವಿಭಾಗದಲ್ಲಿ ನಿಮ್ಮ ಸಿಲಿಂಡರ್ ಎಲ್ಲಿದೆ ಎಂದು ತಿಳಿಯಬಹುವುದು.
ನಿಮ್ಮ ಮೊಬೈಲ್ ನಿಂದ 7715012345 ಸಂಖ್ಯೆಗೆ ‘LPG‘ ಎಂದು whatsapp ಅಥವಾ sms ಮಾಡಿ ಅಪ್ಡೇಟ್ ಪಡೆಯಿರಿ.
3.ಇಂಡೇನ್ ಗ್ಯಾಸ್
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7718955555 ಸಂಖ್ಯೆಗೆ ‘REFILL’ ಎಂದು ಮೆಸೇಜ್ ಕಳುಹಿಸಿ,ತಕ್ಷಣವೇ ನಿಮ್ಮ ಬುಕಿಂಗ್ ಸ್ಟೇಟಸ್ ತಿಳಿಯುತ್ತದೆ, ಅಥವಾ ಇಂಡೇನ್ ಗ್ಯಾಸ್ ನವರ ಅಫೀಷಿಯಲ್ ಪೋರ್ಟಲ್ ನಲ್ಲಿ ‘Track Order’ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಮೊಬೈಲ್ ಸಂಖ್ಯೆಯು ಗ್ಯಾಸ್ ಏಜನ್ಸಿ ಯಲ್ಲಿ ನೋಂದಣಿಯಾಗಿದ್ದರೆ ಮಾತ್ರ ಈ sms ಸೌಲಭ್ಯ ಕೆಲಸ ಮಾಡುತ್ತದೆ.
ಉಪಯೋಗಗಳು
ಕೇವಲ ಒಂದು sms ಮೂಲಕ ಸಿಲಿಂಡರ್ ಎಲ್ಲಿದೆ ಎಂದು ತಿಳಿಯಿರಿ.
ಏಜೆನ್ಸಿಗೆ ಪದೇ ಪದೇ ಫೋನ್ ಮಾಡುವುದು ತಪ್ಪುತ್ತೆ.